Sale!

Aanekaadu| ಆನೆಕಾಡು

Original price was: ₹375.00.Current price is: ₹360.00.

 

ಇದು ಸುಡು ವಾಸ್ತವದ ಚಿತ್ರಣ

‘ಆನೆ ಕಾಡು’ ಜೇನುಕುರುಬರ ಸಮುದಾಯ, ಕುಟುಂಬ ಮತ್ತು ವ್ಯಕ್ತಿಗಳ ಅಂತೆಯೇ ಅವರು ಜೀವಿಸುವ ಭೂಪ್ರದೇಶದ ದುರಂತವನ್ನು ನಿರೂಪಿಸುವ ನೇರವಾದ ಕಥನ, ಸರ್ಕಾರ ಮತ್ತು ಹೋರಾಟಗಾರರ ಘೋಷಿತ ಉದ್ದೇಶಗಳು ಒಂದೇ ಎನಿಸಿದರೂ ಅವುಗಳ ನಡುವೆ ಇರುವ ವಿರೋಧಕ್ಕೆ ಕಾದಂಬರಿ ಕನ್ನಡಿ ಹಿಡಿಯುತ್ತದೆ.  ಇದು ಅಪಾರವಾದ ಲೋಕದರ್ಶನ, ಸಂಶೋಧನೆ ಮತ್ತು ಅನುಭವಗಳನ್ನು ಬಯಸುವ ಪ್ರಕಾರ. ನನ್ನ ಹಲವು ಕಾಲದ ಗೆಳೆಯರೂ ಜಾನಪದ ವಿದ್ವಾಂಸರೂ ಕ್ಷೇತ್ರಕಾರ್ಯ ಪ್ರಿಯರೂ ಆದ ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರು ಮೊದಲಿನಿಂದ ಕೊನೆಯವರೆಗೆ ನಮ್ಮ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಯನ್ನು ನಮಗೆ ಕೊಟ್ಟಿದ್ದಾರೆ. ದೂರದ ಅಮೆರಿಕಾದಲ್ಲಿ ಕುಳಿತು, ನೆನಪುಗಳ ಕಾಡಿನಲ್ಲಿ ಓಡಾಡಿ, ಈ ಕಾದಂಬರಿಯನ್ನು ಕಟ್ಟಿದ್ದಾರೆ.

-ಎಚ್.ಎಸ್. ರಾಘವೇಂದ್ರ ರಾವ್ ಮುನ್ನುಡಿಯಿಂದ,

Price: Rs. 375/-

ISBN: 978-81-960738-5-1

ಪುಸ್ತಕದ ಬಗ್ಗೆ 

ಕಳೆದ ಹತ್ತು ವರ್ಷಗಳಲ್ಲಿ ನಾನು ಓದಿದ ಅತ್ಯುತ್ತಮ ಕಾದಂಬರಿಗಳಲ್ಲಿ ‘ಆನೆ ಕಾಡು’ ಮಹತ್ವದ್ದು.
ಪ್ರೊ. ಎಸ್.ಜಿ. ಸಿದ್ದರಾಮಯ್ಯ
‘ಆನೆ ಕಾಡು’ ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕು.
ನಾಗೇಶ ಹೆಗಡೆ
ನಾಡಿನಿಂದ ಕಾಡಿಗೆ ಆಗುತ್ತಿರುವ ಕ್ರೂರತೆಯ ಸನ್ನಿವೇಶಗಳು, ಕಾಡು ಪ್ರಾಣಿಗಳ ಹಾಗೂ ಬುಡಕಟ್ಟು ಜನರ ನಾಶ, ಗಿರಿಜನರ ಶೋಷಣೆ ಮುಂತಾದ ಹಲವು ಬಗೆಯ ಸೂಕ್ಷ್ಮಗಳು ‘ಆನೆ ಕಾಡು’ ಕಾದಂಬರಿಯಲ್ಲಿ ಕಲಾತ್ಮಕವಾಗಿ ಬಿಚ್ಚಿಕೊಳ್ಳುತ್ತ ತಲ್ಲಣಗೊಳಿಸುತ್ತವೆ.
ಡಾ. ಎಂ. ಎಸ್. ಆಶಾದೇವಿ 

Description

Online Book Store: Bahuroopi.in

editor@ Bahuroopi.in

WhatsApp Store: 70191 82729

 

Reviews

There are no reviews yet.

Be the first to review “Aanekaadu| ಆನೆಕಾಡು”

Your email address will not be published. Required fields are marked *