HALLA BOL | ಹಲ್ಲಾ ಬೋಲ್‌ | ಸುಧನ್ವ ದೇಶಪಾಂಡೆ | ಎಂ.ಜಿ. ವೆಂಕಟೇಶ್

200.00

Description

ಇದು ರಂಗ ಭೂಮಿಯನ್ನು ದುಡಿಯುವ ಜನರ ಬಳಿಗೆ ತರುವಲ್ಲಿ ಗಮನಾರ್ಹ ಯಶಸ್ಸು ಗಳಿಸಿದ ನಟ, ನಿರ್ದೇಶಕ, ಸಂಘಟನಾಕಾರ, ಮತ್ತು ಇನ್ನೂ ಬಹಳಷ್ಟು ಆಗಿದ್ದ ಪ್ರತಿಭಾಶಾಲಿ ಸಫ್ದರ್‌ ಹಾಶ್ಮಿಯ ಬದುಕಿನ ಚಿತ್ರಣ. ನಿಜ, ಇದು ಆರಂಭವಾಗುವುದು ಆತನ ಸಾವಿನೊಂದಿಗೆ. ಏಕೆಂದರೆ, 31 ವರ್ಷಗಳ ಹಿಂದೆ, ಜನವರಿ 1, 1989 ರಂದು ದೇಶದ ರಾಜಧಾನಿಯಲ್ಲಿ ಹಾಡುಹಗಲೇ ಜನರ ನಡುವೆ ʼಹಲ್ಲಾ ಬೋಲ್‌ʼ ನಾಟಕ ಪ್ರದರ್ಶನ ನಡೆಸುತ್ತಿದ್ದಾಗ ಅದರ ಮೇಲೆ ನಡೆದ ವಿರೋಧಿಗಳ ಸಶಸ್ತ್ರ ಹಲ್ಲೆಯಿಂದ ಸಹ ಕಲಾವಿದರನ್ನು ರಕ್ಷಿಸುತ್ತಲೇ ಪ್ರಾಣತೆತ್ತ ನೇತಾರ ಅವರು.

ಅವರ ನಿಕಟ ಸಹಯೋಗಿ ಸುಧನ್ವ ದೇಶಪಾಂಡೆ ʼಎಲ್ಲ ಸಾಮಾನ್ಯತೆಗಳೊಂದಿಗೆ ಅಸಾಮಾನ್ಯವಾದʼ ಅವರ ಕೇವಲ 34 ವರ್ಷಗಳ ಸಂಕ್ಷಿಪ್ರ, ಆದರೆ ಶ್ರೀಮಂತ ಬದುಕಿನ ಕತೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ತಮ್ಮ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ಕಥನ ಶೈಲಿಯಲ್ಲಿ ಇದು ಕೇವಲ ಸಫ್ದರ್‌ ಹಾಶ್ಮಿಯ ಬದುಕಿನ ಕತೆಯಾಗಿಯೇ ಉಳಿಯದೆ, ಆತ ಪ್ರತಿನಿಧಿಸಿದ ಸಾಂಸ್ಕೃತಿಕ ಸಂಘಟನೆ ʼಜನ ನಾಟ್ಯ ಮಂಚ್‌ʼ ಅಥವ ʼಜನಮ್‌ʼನ ಚರಿತ್ರೆಯಷ್ಟೆ ಕೂಡ ಆಗುಳಿಯದೆ, ಸಮಾಜ ಮತ್ತು ಸಂಸ್ಕೃತಿಯ ಸಂಬಂಧಗಳನ್ನು ಕುರಿತಂತೆ ಹಲವು ಸವಾಲುಗಳ ಸಮೀಕ್ಷೆಯೂ ಆಗಿದೆ.

Additional information

Dimensions 21 × 14 × 1.5 cm

Reviews

There are no reviews yet.

Be the first to review “HALLA BOL | ಹಲ್ಲಾ ಬೋಲ್‌ | ಸುಧನ್ವ ದೇಶಪಾಂಡೆ | ಎಂ.ಜಿ. ವೆಂಕಟೇಶ್”

Your email address will not be published. Required fields are marked *