Description
ಇಲ್ಲೊಂದು ಮಿಂಚು ಹುಳ…
ಸುಚಿತ್ರಾ ಹೆಗಡೆ ಅವರ ಕವಿತೆಗಳ ರೀತಿಗೆ, ಪ್ರವಾಸ ಕಥನದ ಹೊಸತನಕ್ಕೆ ಮಾರು ಹೋದವನಿಗೆ ಸಿಕ್ಕಿದ್ದು ಈ ‘ಮಿಂಚು ಹುಳದ ದಾರಿ’. ಕನ್ನಡ ಲಲಿತ ಪ್ರಬಂಧಗಳ ಲೋಕ ಅಂತಹ ಆಶಾದಾಯಕವೇನೂ ಅಲ್ಲ. ಹಿರಿಯರು ಹಾಕಿಕೊಟ್ಟ ದಾರಿ ಸಂಪನ್ನವಾಗಿದ್ದರೂ ಹೊಸ ತಲೆಮಾರು ಲಲಿತ ಪ್ರಬಂಧಗಳತ್ತ ತಿರುಗಿ ನೋಡುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸುಚಿತ್ರಾ ಅವರ ಈ ಕೃತಿ ಒಂದೇ ಏಟಿಗೆ ಮನ ಸೆಳೆಯುತ್ತದೆ.
ಸುಚಿತ್ರಾ ಅವರಿಗೆ ಭಾಷೆಯನ್ನು ಹೇಗೆ ಪಳಗಿಸಬೇಕು ಎನ್ನುವುದು ಗೊತ್ತು, ಯಾವಾಗ ಪಂಚ್ ನೀಡಬೇಕು ಎನ್ನುವುದೂ… ಬೇಕೆಂದಾಗ ಕಚಗುಳಿ ಇಡುವ, ಆಗೀಗ ಕಾವ್ಯಮಯವಾಗುವ, ಸದಾ ಹೊಸತನ್ನೇ ಹುಡುಕುವ ಸುಚಿತ್ರಾ ಅವರ ಈ ಕೃತಿಗೆ ಮಹತ್ವದ ಸ್ಥಾನವಿದೆ.
ಓದಿ ಮುಗಿಸಿದ ಮೇಲೆ ಅನಿಸಿದ್ದು ಸುಚಿತ್ರಾ ಅವರ ಕೃತಿಯಷ್ಟೆ ಅಲ್ಲ, ಅವರೇ ಒಂದು ಮಿಂಚು ಹುಳ ಎಂದು…
-ಜಿ ಎನ್ ಮೋಹನ್




Reviews
There are no reviews yet.