SLAWOMIR MEOZEKNA KATEGALU | ಸ್ಲಾವೊಮೀರ್‌ ವ್ರೋಜೆಕ್‌ನ ಕತೆಗಳು | ಡಾ. ಬಿ.ಎ. ವಿವೇಕ ರೈ |

80.00

 

ಕೃತಿಯ ಬಗ್ಗೆ….

ಸಣ್ಣಕತೆಗಳು ಜಗತ್ತಿನಾದ್ಯಂತ ಸೃಷ್ಟಿಯಾಗಿವೆ. ಸೃಷ್ಟಿಯಾದ ಕತೆಗಳೆಲ್ಲವೂ ಆಯಾಕಾಲದ ವಿದ್ಯಮಾನಗಳನ್ನು ಬಿಚ್ಚಿಟ್ಟಿವೆ. ಹೀಗಾಗಿ ಕತೆಗಳ ಮೂಲಕ ಸಮಕಾಲೀನ ಸಂಗತಿಗಳ ಬದುಕಿನ ವಾಸ್ತವತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಅಂತಹ ಸಾಧ್ಯತೆಯ ಕಡೆಗೆ ಸ್ಲಾವೊಮೀರ್‌ ವ್ರೋಜೆಕ್‌ನ ಕತೆಗಳು ಓದುಗರ ಗಮನವನ್ನು ಸೆಳೆಯುತ್ತವೆ. ಪೋಲೆಂಡಿನ ಸ್ಲಾವೊಮೀರ್‌ ವ್ರೋಜೆಕ್‌ ನಾಟಕಕಾರ, ಕತೆಗಾರ ಹಾಗೂ ವ್ಯಂಗ್ಯಚಿತ್ರಗಾರ. ಮೊದಮೊದಲು ಈತ ಕಮ್ಯುನಿಸಂ ಬಗ್ಗೆ ಒಲವನ್ನು ಇಟ್ಟುಕೊಂಡವನು. ಈತನ ಬರವಣಿಗೆಗೆ ಪ್ರಭಾವ ಬೀರಿದ್ದು ಎರಡನೆಯ ಮಹಾಯುದ್ಧದಲ್ಲಿ ಪೋಲೆಂಡನ್ನು ನಾಜಿಗಳು ಆಕ್ರಮಿಸಿಕೊಂಡ ಸಂದರ್ಭ. ಪ್ರಸ್ತುತ ಕತೆಗಳಲ್ಲಿ ಪೋಲಿಷ್‌ ಜನರ ಮನಸ್ಥಿತಿ, ವ್ಯಕ್ತಿತ್ವ, ನಿರಂಕುಶ ಪ್ರಭುತ್ವ, ಪೊಳ್ಳು ಆಶ್ವಾಸನೆಯ ವಿಡಂಬನೆಗಳನ್ನು ಕಾಣಬಹುದು.

ಸ್ಲಾವೊಮೀರ್‌ ವ್ರೋಜೆಕ್‌ ರಚಿಸಿದ ‘ದ ಎಲಿಫೆಂಟ್‌’ ಇಂಗ್ಲಿಷ್‌ ಕೃತಿಯಲ್ಲಿನ ೨೨ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟವರು ನಮ್ಮ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು. ಬಹುಶಿಸ್ತೀಯ-ಬಹುಭಾಷಾ ವಿದ್ವಾಂಸರಾಗಿರುವ ಅವರು ಜಾಗತಿಕ ಮಟ್ಟದ ಕತೆಗಾರನೊಬ್ಬನ ಮಹತ್ವದ ಕತೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಇಲ್ಲಿಯ ಕಥೆಯ ಆಶಯಗಳು ಬಹುಮಟ್ಟಿಗೆ ಪ್ರಭುತ್ವ ಮನೋಧರ್ಮ ರಾಷ್ಟ್ರಗಳ ನೈಜತೆಯನ್ನು ವಿವರಿಸುವಂತಹವುಗಳಾಗಿವೆ. ಇಂತಹ ಅಪರೂಪದ ಕತೆಗಳನ್ನು ಸಂಕಲನ ರೂಪದಲ್ಲಿ ಅನುವಾದಿಸಿಕೊಟ್ಟ ಡಾ. ಬಿ.ಎ. ವಿವೇಕ ರೈ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.

ಡಾ.ಸ.ಚಿ. ರಮೇಶ 
ಕುಲಪತಿ

Description

Reviews

There are no reviews yet.

Be the first to review “SLAWOMIR MEOZEKNA KATEGALU | ಸ್ಲಾವೊಮೀರ್‌ ವ್ರೋಜೆಕ್‌ನ ಕತೆಗಳು | ಡಾ. ಬಿ.ಎ. ವಿವೇಕ ರೈ |”

Your email address will not be published. Required fields are marked *